ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ಮಾಯೆ ಎಂಥಹ ಅಪಾಯಕಾರಿ ಎಂಬುವುದು ಎಲ್ಲರಿಗೂ ಗೊತ್ತು. ದನಕರುಗಳಿಗೆ ತೊಂದರೆ, ನೀರನ ಹರಿವಿಗೆ ತಡೆ, ಬೆಳೆಗಳ ಬೇರುಗಳಿಗೆ ತೊಂದರೆ ಅಲ್ಲದೇ ಇವುಗಳಿಂದ ಪರಿಸರಮಾಲಿನ್ಯ ಕೂಡಾ ಯತೆಚ್ಚೆವಾಗಿ ಆಗಿ ಮಾನವನಿಗೆ ಮಾರಕವಾಗುವ ವಿಷಯ ತಿಳಿದಿದೆ. ದನಗಳು ತಿಂದರೆ ಸತ್ತುಹೋಗುತ್ತವೆ, ಮನುಷ್ಯ ತಿಂದರೆ ಕರುಳನ್ನು ಸುತ್ತಿಸಿಕೊಂಡು ಮರಣ ಅಪ್ಪುತ್ತಾನೆ. ಭೂಮಿಯಲ್ಲಿ ಹೂತರೆ ನೂರಿನ್ನೂರು ವರ್ಷವಾದರೂ ಕರಗದೇ ಇರುತ್ತದೆ. ಇವುಗಳನ್ನು ಸುಟ್ಟುಹಾಕಿದರೆ ಇದರಿಂದ ಉತ್ಪತ್ತಿಯಾಗುವ ಅಪಾಯಕಾರಿ ಹೊಗೆ (ಇಂಗಾಲ ಡೈ ಆಕ್ಸೈಡ್) ಯು ಮನುಷ್ಯನ ಉಸಿರಾಟವನ್ನೇ ನಿಲ್ಲಿಸಿ ಬಿಡುತ್ತದೆ. ಇಂಥಹ ಅಪಾಯಕಾರಿ ಪಾಲಿಥಿನನ್ನೇ ತಡೆಹಿಡಿಯಬೇಕೆಂದು ಸರಕಾರ ಆಜ್ಞೆ ಹೊರಡಿಸಿದರೂ ಸಫಲವಾಗಲಿಲ್ಲ. ಪ್ರಜ್ಞಾವಂತ ಜನರು ಇದನ್ನು ಅರ್ಥಮಾಡಿಕೊಳ್ಳದೇ ಈ ಮಾಯೆಗೆ ಮರುಳಾಗಿದ್ದಾರೆ.

ಇಂಥಹ ಸಂದರ್ಭದಲ್ಲಿ ಛತ್ತೀಸಗಡದ ಯುವ ವಿಜ್ಞಾನಿ ಅವಧಿಯ ಎಂಬುವರು ಸೊಸೈಟಿ ಫಾರ್ ಪಾರ್‍ಥೆನಿಯಂ ಮ್ಯಾನೋಜಮೆಂಟ್ ಸಂಯೋಜಕರಾಗಿದ್ದುಕೊಂಡು ಈ ಪ್ಲಾಸ್ಟಿಕನ್ನು ತಿಂದು ಅರಗಿಸಿಕೊಳ್ಳಬಲ್ಲ ಕೀಟಗಳನ್ನು ಪತ್ತೆಹಚ್ಚಿದ್ದಾರೆ. ೧೩೫ ಕೀಟಗಳ ಮೇಲೆ ಪ್ರಯೋಗ ನಡಿಸಿದ (೨ ವರ್ಷ) ‘ಅವಧಿಯಾ’ ಎಂಬ ವಿಜ್ಞಾನಿ ಇವುಗಳಲ್ಲಿ ೫ ಕೀಟಗಳು ಈ ಪಾಲಿಥಿನನ್ನು ತಿಂದು ಅರಗಿಸಿಕೊಳ್ಳಬಲ್ಲದೆಂದು ದೃಢೀಕರಿಸಿದ್ದಾರೆ. ಈ ‘ಪ್ಲಾಸ್ಬಿಕ್ ಬಗ್’ ಅನ್ನು ತಾನು ೧೯೯೯ರಲ್ಲಿ ಕಂಡು ಹಿಡಿದಿದ್ದಾಗಿ ಹೇಳಿದ್ದಾರೆ. ಚಳಿಗಾಲದಲ್ಲಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆ ಎಂದೂ ಹೇಳಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಟಕ
Next post ಚಖ್ಖುಪಾಲ ಮಹಾತೇರ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys